top of page
ಮುಯೆನುಸ್ಸುನ್ನಾ ಆನ್ಲೈನ್

MSA media
ಜುಲೈ 20,2024
ಅಗಸ್ಟ್ ೨೪, ೨೫ ರಂದು ಮೈಸೂರಿನಲ್ಲಿ ನಡೆಯಲಿರುವ ಎಸ್ಸೆಸ್ಸೆಫ್ ಕರ್ನಾಟಕದ ಕ್ಯಾಂಪಸ್ ಕಾನ್ಫರೆನ್ಸಿನ 'ಕ್ಯಾಂಪಸ್ ಕನೆಕ್ಟ್' ಕುರಿತಾಗಿ ಎಸ್ಸೆಸ್ಸೆಫ್ ಕರ್ನಾಟಕದ ನಾಯಕರು ಕೆಜಿಎನ್ ಅಧೀನದ ಅಧಿಕೃತ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನದ ಸಾರಥಿಗಳೊಂದಿಗೆ ಅನುಭವ ಹಂಚಿಕೊಂಡರು. ಉತ್ತರ ಕರ್ನಾಟಕದಲ್ಲಿನ ಕ್ಯಾಂಪಸ್ ವಿದ್ಯಾರ್ಥಿಗಳ ಹುರುಪು, ಅಲ್ಲಿನ ಜನಸ್ಪಂದನೆಗಳ ಕುರಿತು ಮಾತನಾಡಿದರು.
ಹಾದಿ ತಪ್ಪುತ್ತಿರುವ ಕ್ಯಾಂಪಸ್ ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟಿರುವ ಅನೈತಿಕತೆಗಳ ಬಗ್ಗೆ ಜಾಗೃತಿ ಮೂಡಿಸಿ ಆಧ್ಯಾತ್ಮಿಕತೆ, ನೈತಿಕತೆಯ ಬಾಗಿಲು ತೆರೆದು ಕೊಡುವುದು ಈ ಕಾನ್ಫರೆನ್ಸಿನ ಮುಖ್ಯ ಧ್ಯೇಯ. ಈ ನಿಟ್ಟಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳ ಸೋಗಿನಿಂದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರಲೆತ್ನಿಸುತ್ತಿರುವ ಎಸ್ಸೆಸ್ಸೆಫ್ಫಿನ ಕಾರ್ಯ ಶ್ಲಾಘನೀಯ.

bottom of page