top of page

ತಲೆ ಬೇರ್ಪಟ್ಟ ಗಿಳಿಯೂ ಹಾರಿತು!

ree

ಜೀಲಾನಿ ಶೈಖರ ಜೀವನ ಪಾಠ-03


ಚತ್ತೆ ಚಗತ್ತಿನ್ನ್ ಜೀವನ್ ಇಡಿಚ್ಚೋವರ್

ಚಾಗುಂ ಕಿಲಾಷತ್ತೆ ನನ್ನಾಕಿ ವಿಟ್ಟೋವರ್


ಇಮಾಮ್ ದಮೀರಿರವರು ಹೇಳುತ್ತಾರೆ: ಇದು ಸರಿಯಾದ ಉಲ್ಲೇಖದ ಮೂಲಕ ನಮಗೆ ತಲುಪಿದ ಘಟನೆಯಾಗಿದೆ. ಒಮ್ಮೆ ಮಹಾನರಾದ ಶೈಖ್ ಮುಹ್ಯುದ್ದೀನ್ ಜೀಲಾನಿ ರಳಿಯಲ್ಲಾಹು ಅನ್ಹುರವರು ಪ್ರವಚನ ನೀಡುತ್ತಿದ್ದರು. ಗಾಳಿಯು ರಭಸದಿಂದ ಬೀಸುತ್ತಿತ್ತು. ಅಷ್ಟರಲ್ಲಿ ಒಂದು ಗಿಳಿಯು ಶಬ್ದ ಮಾಡುತ್ತಾ, ಆ‌ ಸಭೆಯ ಸುತ್ತಲೂ ಹಾರಲು ಪ್ರಾರಂಭಿಸಿತು. ಸಭೆಯಲ್ಲಿದ್ದವರಿಗೆ ತೊಂದರೆಯಾಗತೊಡಗಿತು.


ಆಗ ಶೈಖ್ ಜೀಲಾನಿರವರು ಗಾಳಿಯೊಂದಿಗೆ ಹೀಗೆ ಹೇಳಿದರು:“ಓ ಗಾಳಿಯೇ, ಆ ಗಿಣಿಯ ತಲೆಯನ್ನು ಹಿಡಿ.”ಒಂದೇ ಕ್ಷಣದಲ್ಲಿ ಆ ಗಿಣಿಯ ತಲೆ ಮತ್ತು ದೇಹ ಬೇರ್ಪಟ್ಟು ಬೇರೆಬೇರೆ ಕಡೆ ಬಿದ್ದುಕೊಂಡಿತು.


ಅದನ್ನು ನೋಡಿದ ಶೈಖ್ ತಮ್ಮ ಕುರ್ಚಿಯಿಂದ ಎದ್ದು, ಆ ಗಿಣಿಯನ್ನು ಕೈಯ್ಯಲ್ಲಿ ಹಿಡಿದು ‘ಬಿಸ್ಮಿಲ್ಲಾಹ್’ ಎಂದು ಹೇಳಿ, ಅದರ ಮೈಯನ್ನು ಸವರಿದರು. ಸಭೆಯಲ್ಲಿರುವ ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದಂತೆಯೇ, ಆ ಗಿಣಿ ಹಿಂದಿನಂತೆ ಜೀವಂತವಾಗಿ ಬಾನೆತ್ತರಕ್ಕೆ ಹಾರಿಹೋಯಿತು.


(ಹವಾಯತುಲ್ ಹಯ್ವಾನ್ ಅಲ್ ಕುಬ್ರಾ/ಅಲ್ ದಮೀರಿ)


ಶೈಖ್‌ ಜೀಲಾನಿರವರ ಅನುಗ್ರಹದಿಂದ ಅಲ್ಲಾಹನು ನಮ್ಮೆಲ್ಲಾ ಬಯಕೆಗಳನ್ನು ಈಡೇರಿಸಲಿ. ಆಮೀನ್.


-ಮುಂದುವರಿಯುವುದು…


ಮೂಲ: ಅಬೂಬಕ್ಕರ್ ಅಹ್ಸನಿ ಪರಪ್ಪೂರ್

(ಮುದರ್ರಿಸ್, ಮಅದಿನ್ ಅಕಾಡೆಮಿ)

ಕನ್ನಡಕ್ಕೆ: ಶಾಹುಲ್ ಹಮೀದ್ ಮುಈನಿ ಅಲ್- ಅದನಿ

Comments


bottom of page