ಖಿಲಾಫತ್ ಅಬ್ಬಾಸಿಯಾ: ಗ್ರಂಥರಚನೆಯ ಸುವರ್ಣ ಕಾಲ
- Ashiq Al Mueeni Gandibagilu

- Jun 23, 2025
- 2 min read

ಇಸ್ಲಾಮಿಕ್ ವೈಜ್ಞಾನಿಕ ಕ್ರಾಂತಿಗೆ ಬೆಳಕು ಚೆಲ್ಲುವಲ್ಲಿ ಅಬ್ಬಾಸಿಯ್ಯಾ ಖಿಲಾಫತಿನ ಕಾಲಘಟ್ಟ ಮಹತ್ತರವಾದುದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಇಂದು ಜ್ಞಾನವು ಬೆಳಗುವಲ್ಲಿ ಅಬ್ಬಾಸಿಯ್ಯಾ ಖಿಲಾಫತಿನ ವಿದ್ವಾಂಸರ ಸೇವೆ ಅನನ್ಯವಾದುದು. ಖಿಲಾಫತ್ ಅಮವಿಯ್ಯ್ ಕಾಲಾಘಟ್ಟದಲ್ಲಿ ಜ್ಞಾನ ಕ್ರಾಂತಿ ಮೊಳಕೆಯೊಡೆದು ಅಬ್ಬಾಸಿಯ್ಯಾ ಕಾಲದಲ್ಲಿ ಬೆಳೆದು ಫಲವಾಗಿ ಜಗತ್ತಿನಾದ್ಯಂತ ಪಸರಿಸಿತು. ಈ ಕಾಲಘಟ್ಟದಲ್ಲಿ ವಿವಿಧ ಜ್ಞಾನಶಾಖೆಗಳಲ್ಲಿ ಹೆಚ್ಚಿನ ಪ್ರಮಾಣದ ಗ್ರಂಥ ರಚನೆಯಾದವು. ಈ ಕಾಲವು ಗ್ರಂಥ ರಚನೆ ಮತ್ತು ಭಾಷಾಂತರದ ಸ್ವರ್ಣ ಯುಗವಾಗಿ ಮಾರ್ಪಟ್ಟಿತು. ಅಬ್ಬಾಸಿಯ್ಯಾ ಕಾಲದಲ್ಲಿ ಉಂಟಾದ ಜ್ಞಾನ ಹಾಗೂ ಸಾಹಿತ್ಯ ಕ್ರಾಂತಿಯು ವಿಶ್ವದ ಪ್ರಥಮ ಯುನಿವರ್ಸಿಟಿಯನ್ನೊಳಗೊಂಡಂತೆ ಅನೇಕ ಯುನಿವರ್ಸಿಟಿಗಳ ಉಗಮ ಮತ್ತು ವೈವಿಧ್ಯಮಯ ವೈಜ್ಞಾನಿಕ ಸಂಶೋಧನೆಗೆ ನಾಂದಿ ಹಾಡಿತು.
ಈ ಕಾಲದ ಜನರು ಜ್ಞಾನ ಅನ್ವೇಷಣೆಯಲ್ಲಿ ಉತ್ಸುಕರಾಗಿದ್ದರು. ಜ್ಞಾನ ಅನ್ವೇಷಿಸಿ ಜಗತ್ತಿನ ನಾನಾ ಭಾಗಗಳಿಗೆ ಯಾತ್ರೆ ಹೊರಟರು. ಅನೇಕ ಮೌಲ್ಯಯುತ ಗ್ರಂಥಗಳು , ನಿಘಂಟುಗಳು ರಚನೆಗೊಂಡು ವಿವಿಧ ಭಾಷೆಗಳಲ್ಲಿ ಪ್ರಚಾರ ಪಡೆಯಿತು. ಅಬ್ಬಾಸಿಯ್ಯಾ ಖಲೀಫರು ಜ್ಞಾನ ದಾಹಿಗಳಿಗೆ , ವಿದ್ವಾಂಸರಿಗೆ ನೀಡಿರುವ ಆರ್ಥಿಕ ನೆರವು , ಕಾಣಿಕೆ, ಪುರಸ್ಕಾರ ಗಳು ಈ ಕಾಲಾವಧಿಯಲ್ಲಿ ಜ್ಞಾನ ಅನ್ವೇಷಣೆಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು.ಅಬ್ಬಾಸಿ ಖಲೀಫರಲ್ಲಿ ಬಹುತೇಕ ರಾಜರು , ಮಂತ್ರಿಗಳು ವಿದ್ವಾಂಸರು ಮತ್ತು ಸಾಹಿತಿಗಳು ಆಗಿದ್ದರು . ಸಾಮ್ರಾಜ್ಯದಲ್ಲಿ ವಿಜ್ಞಾನದ ದರ್ಜೆ ನೋಡಿ ವಿವಿಧ ಹುದ್ದೆಗಳಿಗೆ ಸುಲ್ತಾನರು ಅಧಿಕಾರಿಗಳನ್ನು ನೇಮಿಸುತ್ತಿದ್ದರು.
ಅಬ್ಬಾಸಿಯಾ ಖಿಲಾಫತಿನಲ್ಲಿ ಜ್ಞಾನದ ವಿವಿಧ ಶಾಖೆಗಳಲ್ಲಿ ಲಕ್ಷಾಂತರ ಗ್ರಂಥಗಳು ರಚನೆಗೊಂಡು ಕ್ರೋಡಿಕರಣ ಉಂಟಾಯಿತು. ಅವುಗಳಲ್ಲಿ ಇಲ್ಮುಲ್ ಖಿರಾಅತ್, ಇಲ್ಮುತ್ತಫ್ಸೀರ್, ಇಲ್ಮುಲ್ ಹದೀಸ್, ಇಲ್ಮುಲ್ ಕಲಾಂ, ಇಲ್ಮುಲ್ ಫಿಖ್ಹ್,ಇಲ್ಮುನ್ನಹ್ವ್, ಇಲ್ಮುಲ್ಲುಗಾತ್, ಇಲ್ಮುಲ್ ಅದಬ್, ಇಲ್ಮುತ್ತಾರೀಖ್, ಪ್ರಮುಖವಾದವುಗಳಾಗಿವೆ.
ಇಲ್ಮ್ ಶ್ಶರಈಯ್ಯಾ
ಪವಿತ್ರ ಖುರ್ಆನಿನ ಅರ್ಥ ಆಶಯ , ವ್ಯಾಖ್ಯಾನವನ್ನು ಅರ್ಥೈಸುವ ಒಂದು ಫನ್ನ್ (ಜ್ಞಾನಶಾಖೆ ). ಇಲ್ಮ್ ಶ್ಶರಈಯಾವನ್ನು ಅಭ್ಯಸಿಸಲು ಅನೇಕ ಜ್ಞಾನಶಾಖೆಗಳು ಅವಶ್ಯಕವಾಗಿದೆ. ಅವುಗಳಲ್ಲಿ ಇಲ್ಮುಲ್ ಖಿರಾಅತ್,ಇಲ್ಮುತ್ತಫ್ಸೀರ್,ಇಲ್ಮುಲ್ ಹದೀಸ್,ಇಲ್ಮುಲ್ ಕಲಾಂ,ಇಲ್ಮುಲ್ ಫಿಖ್ಹ್,ಇಲ್ಮುನ್ನಹ್ವ್,ಇಲ್ಮುಲ್ಲುಗಾತ್,ಇಲ್ಮುಲ್ ಅದಬ್, ಇಲ್ಮುತ್ತಾರೀಖ್, ಇಲ್ಮುಲ್ ಜಿಗ್ರಾಫೀಯಾ, ಇಲ್ಮುತ್ತಿಬ್ಬ್, ಇಲ್ಮುಲ್ ಫಲ್ಸಫಾ ,ಇಲ್ಮುಲ್ ರಿಯಾಳಿಯಾ, ಇಲ್ಮುಲ್ ಹಯ್ಹಾ,ಇಲ್ಮುನ್ನುಜೂಂ ಇತ್ಯಾದಿ ಜ್ಞಾನಶಾಖೆಗಳು ಪ್ರಮುಖವಾದವುಗಳಾಗಿವೆ.
ಇಲ್ಮುಲ್ ಖಿರಾಅತ್
ಪೈಗಂಬರ್ ﷺ ರಿಗೆ ಅವತೀರ್ಣಗೊಂಡ ಪವಿತ್ರ ಖುರ್ಆನಿನ ಪಾರಾಯಣ ಶೈಲಿಯನ್ನು ಅಭ್ಯಸಿಸುವ ಜ್ಞಾನಶಾಖೆ ಇಲ್ಮುಲ್ ಖಿರಾಅತ್. ಸ್ವಹಾಬಿಗಳ ಪೈಕಿ ಏಳು ಪ್ರಮುಖ ಖಾರಿಅ್ ಗಳಿದ್ದರು.ಉಸ್ಮಾನ್ ಇಬ್ನ್ ಅಫ್ಫಾನ್, ಅಲಿಯ್ಯ್ ಬಿನ್ ಅಬೀತ್ವಾಲಿಬ್, ಝೈದ್ ಬಿನ್ ಸಾಬಿತ್ , ಅಬ್ದುಲ್ಲಾಹಿ ಬಿನ್ ಮಸ್ಊದ್, ಅಬುದ್ದರ್ದಾಅ್, ಅಬೂ ಮೂಸಲ್ ಅಶ್ ಅರೀ, ಈ ಏಳು ಸ್ವಹಾಬಿಗಳು ಪ್ರಮುಖ ಖಾರಿಅ್ ಗಳಾಗಿದ್ದರು. ಈ ಏಳು ಖಾರಿಅ್ ಗಳ ಮೇಲೆ ಸ್ವಹೀಹಾದ ಖಿರಾಅತ್ ಮುನ್ನೆಲೆಗೆ ಬಂದಿತು.ಅಬ್ದುಲ್ಲಾಹಿ ಬಿನ್ ಆಮೀರ್ ಅಶ್ಶಾಮಿ, ಅಬ್ದುಲ್ಲಾಹಿ ಬಿನ್ ಕಷೀರ್ ಅಲ್ ಮಕ್ಕಿಯ್ಯ್, ಆಸ್ವೀಂ ಅಲ್ ಕೂಫಿಯ್ಯ್, ಅಬೂ ಅಂರ್ರ್ ಬಿನ್ ಅಲಾಅ್ ಅಲ್ ಬಸ್ವರಿ , ನಾಫಿಅ ಬಿನ್ ನುಐಮ್ ಅಲ್ ಮದನಿ, ಅಲಿಯ್ಯ್ ಬಿನ್ ಹಂಝ ಅಲ್ ಕಿಸಾಯಿ, ಹಂಝ ಬಿನ್ ಹಬೀಬ್ ಏಳು ಪ್ರಮುಖ ಖಾರಿಅ್ ಗಳಾಗಿದ್ದರು.
ಇಲ್ಮುತ್ತಫ್ಸೀರ್
ಪವಿತ್ರ ಖುರ್ಆನಿನ ಅರ್ಥ, ವ್ಯಾಖ್ಯಾನ,ಖುರ್ಆನಿನ ಸಾರವನ್ನು ಅಭ್ಯಸಿಸುವ ಶಾಸ್ತ್ರ ಇಲ್ಮುತ್ತಫ್ಸೀರ್. ಇಲ್ಮುತ್ತಫ್ಸೀರ್ ಕ್ರಮಬದ್ಧವಾಗಿ ಕ್ರೋಢೀಕರಣಕ್ಕೆ ಮುನ್ನುಡಿ ಬರೆದದ್ದು ಅಬ್ಬಾಸಿ ಕಾಲದಲ್ಲಾಗಿದೆ. ಪವಿತ್ರ ಖುರ್ಆನಿನ ತಪ್ಸೀರಿಗೆ ಎರಡು ರೀತಿಯ ವ್ಯಾಖ್ಯಾನಕಾರರಿದ್ದಾರೆ. ಮೊದಲನೇಯದ್ದು ತಪ್ಸೀರು ಬಿಲ್ ಮೌಷೂರ್ ಎರಡನೇಯದು ತಪ್ಸೀರುಬಿರ್ರಅಯ್ಯ್ . ಮೊದಲನೆಯದು ಅಹ್ಲುಸುನ್ನತಿನದ್ದು ,ಎರಡನೇಯದ್ದು ಮುಬ್ತದಿಅಗಳಾದ್ದಾಗಿದೆ. ಈ ಕಾಲದಲ್ಲಿ ಅನೇಕ ಸುಪ್ರಸಿದ್ಧ ವ್ಯಾಖ್ಯಾನ ಗ್ರಂಥಗಳಿದ್ದವು.ತಪ್ಸೀರ್ ಜಾಮಿವುಲ್ ಬಯಾನ್ ಸುಪ್ರಸಿದ್ಧ ತಪ್ಸೀರ್ ಗ್ರಂಥವಾಗಿದೆ.
ಇಲ್ಮುಲ್ ಹದೀಸ್
ಇಸ್ಲಾಮಿಕ್ ಶರೀಅತ್ತಿನಲ್ಲಿ ಪವಿತ್ರ ಖುರ್ಆನ್ ನಂತರದ ಎರಡನೇಯ ಇಸ್ಲಾಮಿಕ್ ಆಧಾರಸ್ತಂಭ ಪೈಗಂಬರ್ ﷺ ರ ಪುಣ್ಯ ಹದೀಸಾಗಿದೆ. ಪೈಗಂಬರ್ﷺ ರ ಕಾಲದಲ್ಲಿ ಅನುಯಾಯಿಗಳಾದ ಸ್ವಹಾಬಿಗಳು ಹದೀಸನ್ನು ಕಂಠಪಾಠ ಮಾಡಿದ್ದರು. ನಂತರದ ಕಾಲದಲ್ಲಿಯೂ ಹದೀಸ್ ಕಂಠಪಾಠ ಮುಂದುವರೆದಿತ್ತು.ಕಾಲ ಕ್ರಮೇಣ ಹದೀಸ್ ಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಕುಂಠಿತಗೊಂಡು ಹದೀಸ್ ಕ್ರೋಢೀಕರಣದ ಅನಿವಾರ್ಯತೆ ಹೆಚ್ಚಾಯಿತು. ಅಬ್ಬಾಸಿ ಕಾಲದಲ್ಲಿ ಹದೀಸ್ ಜ್ಞಾನದ ಕ್ರೋಢೀಕರಣಕ್ಕೆ ಮುಹೂರ್ತವಿಟ್ಟಿತು. ಮಾಲಿಕ್ ಇಬ್ನ್ ಅನಸ್ ( ರ.ಅ) ರವರ ವಿಖ್ಯಾತ 'ಮುವತ್ವ', ಅಹ್ಮದ್ ಇಬ್ನ್ ಹಂಬಲ್ ( ರ.ಅ) ರವರ 'ಮುಸ್ನದ್', ಸ್ವಹೀಹುಲ್ ಬುಖಾರಿ, ಸ್ವಹೀಹು ಮುಸ್ಲಿಂ, ಸುನನು ಅಬೀ ದಾವೂದ್, ಜಾಮಿಉ ತ್ತುರ್ಮುದಿ, ಸುನನು ಇಬ್ನ್ ಮಾಜ, ಸುನನು ನ್ನಸಾಯಿ ,. ಇವುಗಳು ಪವಿತ್ರ ಹದೀಸ್ ಜ್ಞಾನದ ಮಾತೆಯಾಗಿದೆ.
ಪ್ರಬುದ್ಧ ವಿದ್ವಾಂಸರು,ಫುಕಹಾಹ್, ಸಾಹಿತಿಗಳ ನಿರಂತರ ಅಧ್ಯಯನ ಮತ್ತು ಅನ್ವೇಷಣೆಗಳಿಂದ ಅನೇಕ ವೈಜ್ಞಾನಿಕ ಕ್ಷೇತ್ರಗಳು ಉಗಮಗೊಂಡವು. ಅನೇಕ ಮದ್ರಾಸ , ಗ್ರಂಥಾಲಯಗಳು ಹುಟ್ಟಿಕೊಂಡಿತು. ಇದರಿಂದ ಅಬ್ಬಾಸಿಯ್ಯಾ ಖಿಲಾಫತಿನ ವೈಜ್ಞಾನಿಕ , ಸಾಂಸ್ಕೃತಿಕ, ನಾಗರಿಕ ಸಂಪತ್ತು ವೃದ್ಧಿಯಾಯಿತು.






Comments