top of page

ಅದ್ಭುತಗಳ ಹಿಂದೆ

ಜೀಲಾನಿ ಶೈಖರ ಜೀವನ ಪಾಠ-10

ree

ಟೈಗ್ರಿಸ್ ನದಿಯ ನೀರು ತುಂಬಿ ಹರಿಯುತ್ತಿದ್ದ ಸಮಯ. ಜನರು ‘ನಾವು ನೀರಿನಲ್ಲಿ ಮುಳುಗಿಬಿಡುವೆವೋ?’ ಎಂದು ಭಯಭೀತಗೊಂಡು ಶೈಖರ ಬಳಿಗೆ ತೆರಳಿ ಅಂಗಲಾಚಿದರು. ಮಹಾನರಾದ ಶೈಖ್ ಜೀಲಾನಿ ತಮ್ಮ ಬೆತ್ತವನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ, ಒಂದು ಸ್ಥಳದಲ್ಲಿ ಗೆರೆಯನ್ನು ಎಳೆದು ಹೀಗೆ‌ ಹೇಳಿದರು:“ಇಲ್ಲಿ ತನಕ ಮಾತ್ರ!.”ತಕ್ಷಣವೇ ನದಿಯ ನೀರು ಹಿಂದೆ ಸರಿದು, ಕ್ರಮೇಣ ಕಡಿಮೆಯಾಯಿತು.


(ಮೂಲ: ಖಲಾಯಿದುಲ್ ಜಾಹಿರ್)


ವಾಸ್ತವದಲ್ಲಿ ಕರಾಮತ್ ಎಂದರೆ ಏನು?

ಧರ್ಮ ನಿಷ್ಠೆ ಅಂದರೆ ನೇರ ಹಾದಿಯಲ್ಲಿ ಚಾಚೂ ತಪ್ಪದೇ, ಅತಿ ಸೂಕ್ಷ್ಮ ಜೀವನ ನಡೆಸುವುದು. ಇದಕ್ಕೆ ಎರಡು ವಿಚಾರಗಳು ಅತ್ಯಗತ್ಯ. ಅಲ್ಲಾಹನಲ್ಲಿ ನಿಜವಾದ ನಂಬಿಕೆಯಿಡುವುದು ಮತ್ತು ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬೋಧನೆಗಳನ್ನು ಕಾಯಾ ವಾಚಾ ಮನಸಾ ಪಾಲಿಸುವುದು. ಅಬೂ ಯಸೀದ್ ಅಲ್-ಬಿಸ್ತಾಮಿ ರಹಿಮಹುಲ್ಲಾಹುರವರು ಹೇಳಿದ್ದಾರೆ:“ಯಾರಾದರೂ ತಮ್ಮ ಹಾಸಿಗೆಯನ್ನು ನೀರಿನ ಮೇಲೆ ಹಾಸಿಕೊಂಡು, ಆಕಾಶದಲ್ಲಿ ಕೂತರೂ ಅವರನ್ನು ನೋಡಿ ವಂಚಿತರಾಗಬೇಡಿ. ಅಲ್ಲಾಹು ಮತ್ತು ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಆಜ್ಞೆಗಳ ಪಾಲನೆ ಮತ್ತು ನಿಷೇಧಗಳಿಂದ ದೂರವಿರುವ ವಿಷಯದಲ್ಲಿ ಅವರ ಸ್ಥಿತಿ ಹೇಗಿದೆಯೆಂದು ಮೊದಲು ನೋಡಿ.”


ಮಹಾನರೊಂದಿಗೆ ಕೇಳಲಾಯಿತು:“ಒಬ್ಬಾತ ಒಂದೇ ರಾತ್ರಿಯಲ್ಲಿ ಮಕ್ಕಾಗೆ ತಲುಪಿದರೆ ಅದ್ಭುತವಲ್ಲವೇ?.”“ಶೈತಾನನೂ ಕ್ಷಣ ಮಾತ್ರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಲುಪುತ್ತಾನೆ.”ಶೈಖರು ಉತ್ತರಿಸಿದರು. ಪ್ರಶ್ನೆ ಮುಂದುವರಿಯಿತು:“ಒಬ್ಬ ಮನುಷ್ಯ ನೀರಿನ ಮೇಲೆ ನಡೆಯುತ್ತಾನೆಂದರೆ?.”ಮಹಾನರು ಅಷ್ಟೇ ಸಲೀಸಾಗಿ ಉತ್ತರವನ್ನಿತ್ತರು. “ನೀರಿನಲ್ಲಿ ಈಜುವ ಮೀನು, ಗಗನದಲ್ಲಿ ಹಾರುವ ಪಕ್ಷಿ ಇವುಗಳೆಲ್ಲವೂ ಅವನಿಗಿಂತ ದೊಡ್ಡ ಅಚ್ಚರಿಯಲ್ಲವೇ?”


(ಮೂಲ: ಶರಹ್ ಅಲ್-ಹಿಕಮ್ ಅತ್ತಾಇಯ್ಯಾ)


ಯಾವತ್ತೂ ಅದ್ಭುತಗಳನ್ನು ನೋಡಿ ಯಾವೊಬ್ಬರನ್ನೂ ಅಳೆಯಬಾರದು. ಅಲ್ಲಾಹನ ಮತ್ತು ಪ್ರವಾದಿಯವರ ಆಜ್ಞೆಗಳ ಪಾಲನೆ ಹಾಗೂ ನಿಷೇಧಗಳಿಂದ ದೂರವಿರುವ ವಿಷಯದಲ್ಲಿ ಆತನ ನಿಲುವೇನು ಎಂಬುದರ ಆಧಾರದಲ್ಲಾಗಿರಬೇಕು. ಅದಾಗಿದೆ ಮುಹ್ಯಿದ್ದೀನ್ ಶೈಖರ ಕರಾಮತ್ತಿನಿಂದ ನಮಗೆ ಮನದಟ್ಟಾಗುವುದು. ಮಹಾನರ ಬರ್ಕತಿನಿಂದ ಅಲ್ಲಾಹನ ಆಜ್ಞೆಗಳನ್ನು ಅನುಸರಿಸಲು ಮತ್ತು ನಿರ್ಬಂಧಿತ ವಿಚಾರಗಳನ್ನು ತ್ಯಜಿಸಿ ಬದುಕಲು ಅಲ್ಲಾಹನು ತೌಫೀಕ್ ನೀಡಲಿ. ಆಮೀನ್.


-ಮುಂದುವರಿಯುವುದು…

 
 
 

Comments


bottom of page