ಶೈತಾನನೂ ಬೆಚ್ಚಿಬಿದ್ದ!
- Mueenussannah Online
- Oct 3
- 1 min read

ಜೀಲಾನಿ ಶೈಖರ ಜೀವನ ಪಾಠ-09
ಒಮ್ಮೆ ಮಹಾನರಾದ ಮುಹ್ಯಿದ್ದೀನ್ ಶೈಖರು ಆಕಾಶಮಂಡಲವನ್ನು ತುಂಬಿದ ಮಹಾಪ್ರಕಾಶವೊಂದನ್ನು ನೋಡಿದರು. ಆ ಪ್ರಕಾಶದಿಂದ ಒಂದು ರೂಪ ಅವರ ಕಡೆಗೆ ಬಂದು ಹೀಗೆ ಹೇಳಿತು :“ಓ ಅಬ್ದುಲ್ ಖಾದಿರ್, ನಾನು ನಿನ್ನ ಸೃಷ್ಟಿಕರ್ತನಾಗಿದ್ದೇನೆ. ನಿನಗಾಗಿ ನಾನು ನಿಷಿದ್ಧವಾದುದೆಲ್ಲವನ್ನೂ ಹಲಾಲ್ ಮಾಡಿರುವೆನು.”ತಕ್ಷಣವೇ ಶೈಖರು“ಓ ಶಪಿಸಲ್ಪಟ್ಟವನೇ, ದೂರ ಸರಿ!”ಎಂದರು.
ಆ ಹೊತ್ತಿಗಾಗಲೇ ಆಕಾಶ ಕತ್ತಲಾಯಿತು. ಆ ರೂಪ ಹೊಗೆಯಾಗಿ ಮಾಯವಾಯಿತು. ನಂತರ ಅದು“ಓ ಅಬ್ದುಲ್ ಖಾದಿರ್, ನಿನ್ನ ಸೃಷ್ಟಿಕರ್ತನ ಬಗ್ಗೆ ನಿನಗೆ ಚೆನ್ನಾಗಿ ಅರಿತಿರುವುದರಿಂದ ನೀನು ನನ್ನ ಉಪಟಳನದಿಂದ ಪಾರಾದೆ. ನಿನ್ನಂತೆಯೇ ಇಲಾಹೀ ಮಾರ್ಗದಲ್ಲಿರುವ 70 ಸೂಫಿಯರನ್ನು ನಾನು ಇದೇ ರೀತಿ ಮಾಡಿ ದಾರಿ ತಪ್ಪಿಸಿರುವೆನು.”ಎಂದಿತು. ಆಗ ಮಹಾನವರು ಅಲ್ಲಾಹನ್ನು ಸ್ತುತಿಸಿದರು.
‘ಅದು ಶೈತಾನನೆಂದು ಹೇಗೆ ತಿಳಿಯಿತು?’ ಎಂದು ಶೈಖರೊಂದಿಗೆ ಕೇಳಲ್ಪಟ್ಟಾಗ ಅವರು ಹೀಗೆ ಹೇಳಿದರು:“ಅಲ್ಲಾಹನು ಹಲಾಲ್ ಮಾಡಿದವುಗಳನ್ನು ಹರಾಮ್ ಮಾಡಿರುವೆ’ ಎಂದು ಹೇಳಿದ ಅವನ ಮಾತಿನಿಂದಲೇ ನನಗೆ ಅದು ಮನದಟ್ಟಾಯಿತು.”
(ಮೂಲ: ತಬಖಾತ್ ಅಶ್ಶಅ್ರಾನಿ)
-ಮುಂದುವರಿಯುವುದು…
ಪದವಿ ಹೆಚ್ಚಾಗಿದೆ ಎಂದುಕೊಂಡು ಅಲ್ಲಾಹನು ಯಾರಿಗೂ ಹರಾಮನ್ನು ಹಲಾಲ್ ಮಾಡುವುದಿಲ್ಲ. ಹಲಾಲ್ ಮಾಡುವುದಾದರೆ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಮೊದಲು ಮಾಡಬೇಕಾಗಿತ್ತು. ಧರ್ಮನಿಷ್ಠೆಯಿಂದ ಬದುಕುವವರು ಹಲಾಲ್ ಆದ ವಿಷಯಗಳಲ್ಲಿಯೇ ಅತ್ಯಂತ ಸೂಕ್ಷ್ಮತೆ ಪಾಲಿಸುತ್ತಾರೆ. ಅಲ್ಲಾಹನು ಮಹಾನರ ಬರಕತಿನಿಂದ ನಮ್ಮನ್ನು ಶೈತಾನದ ಉಪಟಳದಿಂದ ಕಾಪಾಡಲಿ. ಆಮೀನ್.






Comments