ಖಾನ್ಖಗಳು: ಇಸ್ಲಾಮಿಕ್ ಸಂಪ್ರದಾಯದ ಸೌಂದರ್ಯ
- Thamsheer Al mueeni Ullal

- Jun 1
- 2 min read

ಖಾನ್ಖ ಎಂಬುದು ಪರ್ಶಿಯನ್ ಪದವಾಗಿದ್ದು, ಇದರ ಅರ್ಥ ಮೇಜು ಅಥವಾ ರಾಜರು ತಿನ್ನುವ ಸ್ಥಳ. ಇಸ್ಲಾಮಿಕ್ ಎಮಿರ್ (ಸ್ಥಳೀಯ ಆಡಳಿತಗಾರ) ಮತ್ತು ಸುಲ್ತಾನರು ದತ್ತಿ ಉದ್ದೇಶಕ್ಕಾಗಿ ಹಾಗೂ ಸಮಾಜದ ಪ್ರಯೋಜನಕ್ಕಾಗಿ ಇದನ್ನು ನಿರ್ಮಿಸಿದರು. ಇವುಗಳನ್ನು ನಿರ್ದಿರ್ಷ್ಟವಾಗಿ, ಸೂಫಿಗಳಿಗೆ ಆಹಾರ ಮತ್ತು ಶಿಕ್ಷಣ ಒದಗಿಸುವ ಮೂಲಕ ವಕ್ಫ್ ಮಂಡಳಿಯು ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತಿತ್ತು. ಈ ಖಾನ್ಖಗಳು ನಮಾಝ್ (ಐದು ಬಾರಿಯ ಪ್ರಾರ್ಥನೆ), ಶೇಖ್ ಗಳ ಉಪನ್ಯಾಸ ಕೇಳಲು ಮತ್ತು ದ್ಸಿಕ್ರ್ (ಅಲ್ಲಾಹನ ಸ್ಮರಣೆ), ಮುರಾಕಬ (ಧ್ಯಾನ) ಮುಂತಾದ ಚಟುವಟಿಕೆಗಳಿಗೆ ಬೇಕಾಗಿ ವಿಶೇಷ ಕೊಠಡಿಗಳನ್ನು ಹೊಂದಿತ್ತು. ಖಾನ್ಖ, ಸೂಫಿಗಳ ಮನೆ ವಾಸ್ತವವಾಗಿ ಜನಸಾಮಾನ್ಯರಿಗೆ ತಪಸ್ಸು ಮತ್ತು ಕಠಿಣತೆಯ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಒಂದು ಆಧ್ಯಾತ್ಮಿಕ ಕೇಂದ್ರವಾಗಿತ್ತು ಮತ್ತು ಎಲ್ಲಾ ಹಿನ್ನೆಲೆಯ ಜನರನ್ನು ಆಕರ್ಷಿಸುತ್ತಿತ್ತು. ವಿದ್ಯಾರ್ಥಿಗಳು, ಕುಶಲಕರ್ಮಿಗಳು, ಸೈನಿಕರು ಮತ್ತು ಅಧಿಕಾರಿಗಳು, ಸೂಫಿ ಗಳು ಮತ್ತು ಶುಯೂಖರು(ಶಿಕ್ಷಕರು) ಸಮಾಜದಲ್ಲಿ ಒಳ್ಳೆಯದನ್ನು ವಿಧಿಸಲು ಮತ್ತು ಕೆಟ್ಟದ್ದನ್ನು ನಿಷೇಧಿಸಲು ಹಾಗೂ ವ್ಯಕ್ತಿಗಳಿಗೆ ಸ್ವಯಂ ಸುಧಾರಿಸುವಲ್ಲಿ (ನಫ್ಸ್) ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಖಾನ್ಖವು ಇಸ್ಲಾಮಿನಲ್ಲಿ ಒಂದು ಆರಾಧನಾ ಕೇಂದ್ರವಾಗಿದೆ. ಇದು ಮುಸ್ಲಿಂ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪಾತ್ರವನ್ನು ವಹಿಸಿದೆ.
ಖಾನ್ಖಗಳು ಫಿಕ್ಹ್ ( ಇಸ್ಲಾಮಿಕ್ ಕರ್ಮಶಾಸ್ತ್ರ), ಹದೀಸ್ ಬೋಧನೆಗಳ ಮೇಲೆ ಕೇಂದ್ರೀಕರಿಸಿದ ವಿಭಾಗವನ್ನು ಒಳಗೊಂಡಿತ್ತು ಮತ್ತು ವಿವಿಧ ವಿಜ್ಞಾನದ ಪುಸ್ತಕಗಳ ಗ್ರಂಥಾಲಯವಿತ್ತು. ಸೂಫಿ ಸಂತರು ಇಮಾಮರಾಗಿದ್ದರು. ಇವರು ಸಮಾಜದಲ್ಲಿ ಸಕ್ರಿಯವಾಗಿ ಧರ್ಮ ಬೋಧನೆ ಮತ್ತು ಇತರ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು.
ಖಾನ್ಖಗಳಲ್ಲಿ ಅನೇಕ ರೀತಿಯ ಉದ್ಯೋಗಗಳಿದ್ದವು ಎಂದು ದಾಖಲೆಗಳು ಹೇಳುತ್ತವೆ. ಇಮಾಮರು, ಶಿಕ್ಷಕರು, ಸಹಾಯಕ ಶಿಕ್ಷಕರು, ಗ್ರಂಥಪಾಲಕರು,
ವೈದ್ಯರು, ದ್ವಾರಪಾಲಕರು, ಅಡುಗೆ ಮನೆ ಮೇಲ್ವಿಚಾರಕರು. ವಕ್ಫ್ ಮಂಡಳಿಯು ಖಾನ್ಖದಲ್ಲಿ ಸೇವೆ ಸಲ್ಲಿಸಿದ ವೃತ್ತಿಪರರಿಗೆ ಸಂಬಳವನ್ನು ಮತ್ತು ಹೆಚ್ಚುವರಿಯಾಗಿ ತರಕಾರಿ ಹಾಗೂ ದಿನಸಿ ಪದಾರ್ಥ ಗಳನ್ನು ನೀಡುತ್ತಿತ್ತು.
ಇಸ್ಲಾಮಿಕ್ ಜಗತ್ತಿನಲ್ಲಿ ಧಾರ್ಮಿಕ ಮತ್ತು ತರ್ಕಬದ್ಧ ಕಲಿಕೆಯ ಕೇಂದ್ರವಾದ ಮದರಸಾಗಳು ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನ ನೀಡುವುದರೊಂದಿಗೆ ಸ್ವಯಂ ಜ್ಞಾನ (ನಫ್ಸ್) ಕರಗತ ಮಾಡುವ ಸಲುವಾಗಿ ಈ ಖಾನ್ಖ ಗಳನ್ನು ನಿರ್ಮಿಸಿತು . ಜೇರುಸಲಂ, ಈಜಿಪ್ಟ್ ಮತ್ತು ಸಿರಿಯಾ ವನ್ನು ವಶಪಡಿಸಿದ ನಂತರ ಖಾನ್ಖ ಕಟ್ಟಡಗಳನ್ನು ಹೆಚ್ಚಿಸಿದ ಸ್ವಲಾಹುದ್ದೀನ್ ಅಯ್ಯೂಬಿಯವರು ಮದರಸ ಮತ್ತು ಖಾನ್ಖಗಳನ್ನು ಒಂದೇ ಕೇಂದ್ರದಲ್ಲಿ ನಿರ್ಮಿಸಿದರು. ಚರ್ಚ್ ಆಫ್ ಪುರಾತನದ ಸಮೀಪ ಶಾಫೀ ವಿದ್ವಾಂಸರ ಕೇಂದ್ರ ಮತ್ತು ಖಾನ್ಖ ಗಳನ್ನು ನಿರ್ಮಿಸಿದರು.
ಸೂಫಿಗಳು ಸಮಾಜದಲ್ಲಿ ಜ್ಞಾನವನ್ನು ಪಸರಿಸಿದರು. ಸೂಫಿ ಎಂಬ ಪದದ ಹಲವಾರು ಅರ್ಥಗಳಲ್ಲಿ ಒಂದಾದ "ಸ್ವಫಾ" ಎಂಬ ಅರೇಬಿಕ್ ಪದದಿಂದ ಬಂದಿದೆ. ಇವರ ಮುಖ್ಯ ಉದ್ದೇಶ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಸಹಾಯ ಮಾಡುವುದು, ಇಸ್ಲಾಂ ಧರ್ಮ ವನ್ನು ಅಭ್ಯಾಸಿಸುವುದರ ಮೂಲಕ ತಮ್ಮ ಸ್ವ ಶರೀರವನ್ನು ಶುದ್ಧೀಕರಿಸುವುದಾಗಿದೆ. ಇದನ್ನು ಇಸ್ಲಾಮಿಕ್ ಸಾಂಪ್ರದಾಯಿಕವಾಗಿ "ತಸವ್ವುಫ್" ಎಂದು ಕರೆಯುತ್ತಾರೆ. ಇದರ ಅರ್ಥ "ಇಸ್ಲಾಮಿಕ್ ಆಧ್ಯಾತ್ಮಿಕತೆ" ಪಾಶ್ಚಾತ್ಯೀಕರಿಸಿದ ಸೂಫಿಸಂ ಗೆ ಸಮಾನಾರ್ಥಕವಾಗಿದೆ.
ಬಗ್ಧಾದ್ ನ ಪ್ರಸಿದ್ಧ ಸೂಫಿ ಜುನೈದ್ ಅಲ್ ಬಗ್ಧಾದಿ (ರ. ಅ) (830-910 CE) ಅವರ ಶಿಷ್ಯ ಹಾಗೂ ಉತ್ತರಾಧಿಕಾರಿ ಮಹಮ್ಮದ್ ಅಲ್ ಜುರೈರಿ (ರ.ಅ) ತಸವ್ವುಫ್ ನ ವ್ಯಾಖ್ಯಾನವನ್ನು ಸರಳವಾಗಿ ಸಂಕ್ಷಿಪ್ತಗೊಳಿಸುತ್ತಾರೆ: "ಭವ್ಯವಾದ ನೈತಿಕ ಗುಣಲಕ್ಷಣಗಳನ್ನು ಊಹಿಸುವುದು ಮತ್ತು ಕೆಲವೊಂದನ್ನು ತ್ಯಜಿಸುವುದು"
ಈ ಖಾನ್ಖ ಗಳ ಮೇಲೆ ಜನರನ್ನು ಆಕರ್ಷಿಸಿದ್ದು ಧಾರ್ಮಿಕ ಜೀವನದ ಮೇಲೆ ಪ್ರಭಾವ ಬೀರುವ ಮತ್ತು ನಂಬಿಕೆಯನ್ನು ಬಲಪಡಿಸುವ ಭಾವನಾತ್ಮಕ ಅಂಶಗಳಾಗಿವೆ. "ಅಲ್ಲಾಹನ (ಸ್ಮರಣೆ) ಪ್ರದರ್ಶಕರೊಳಗೆ ಭಾವಪರವಶತೆಯನ್ನುಂಟು ಮಾಡುತ್ತದೆ,ಮಾನವ ಜೀವನಕ್ಕೆ ಆಂತರಿಕ ನೆಮ್ಮದಿಯನ್ನುಂಟು ಮಾಡುವ ಪ್ರಾಥಮಿಕ ಮೂಲವಾಗಿದೆ"(ಕುರ್ ಆನ್ 13:28)
ಖಾನ್ಖಸ್ ಮತ್ತು ಆಡಳಿತ ಸ್ಥಾಪನೆ
ಸಮಾಜದಲ್ಲಿ ಸುವ್ಯವಸ್ಥೆ ಕಾಪಾಡಲು ಮತ್ತು ವಿಭಜನೆಗೆ ಕಾರಣವಾದ ಅಂಶಗಳ ವಿರುದ್ಧ ಹೋರಾಡುವಲ್ಲಿ ಖಾನ್ಖ ಗಳು ಮುಖ್ಯ ಪಾತ್ರವನ್ನು ವಹಿಸಿತ್ತು. ಇಸ್ಲಾಮಿಕ್ ಸೂಫಿಗಳು ಸುಲ್ತಾನ್ ಸ್ವಲಾಹುದ್ದೀನ್ ರವರ ಕಾರ್ಯಾಚರಣೆ ಹಾಗೂ ವಿಜಯದ ಸಂದರ್ಭಗಳಲ್ಲಿ ಅವರೊಂದಿಗೆ ಕಾರ್ಯಾಚರಿಸುತ್ತಿದ್ದರು ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಸಿರಿಯಾ, ಈಜಿಪ್ಟ್ ವಿಜಯಗಳಲ್ಲಿ ಸೂಫಿಗಳು ಸಕ್ರೀಯರಾಗಿದ್ದರು ಎಂದು ಪ್ರಸಿದ್ಧ ಇತಿಹಾಸಕಾರ ಇಬ್ನು ಬಲ್ಲಿಕನ್ ಮತ್ತು ಅಲ್ ವರ್ದಿ ಹೇಳುತ್ತಾರೆ. ಕಾನ್ಸ್ಟಾಂಟಿನೊಪಲ್ ಅನ್ನು ವಶಪಡಿಸಿದ ನಂತರ ಸುಲ್ತಾನ್ ಮಹ್ಮದ್ ll ನಗರವನ್ನು ಕಲಿಕೆ ಮತ್ತು ಸಂಸ್ಕೃತಿಯ ಕೇಂದ್ರವನ್ನಾಗಿಸಲು ನಿರ್ಧರಿಸಿದ ಅವರು ಝವಿಯೆಸ್(ಅರಬಿಕ್ ನಲ್ಲಿ ಝವಿಯಾಹ್) ನಿರ್ಮಿಸಲು ಆದೇಶಿಸಿದರು. ಈ ಪದವನ್ನು ಟರ್ಕಿಶ್ ನಲ್ಲಿ ಖಾನ್ಖ ಗಳಿಗೆ ಹೇಳುತ್ತಾರೆ. ಈ ಕೇಂದ್ರಗಳನ್ನು ಸ್ಥಾಪಿಸುವ ಅಭ್ಯಾಸ ವನ್ನು ಒಟ್ಟೋಮನ್ ಗಳು ಸಲ್ಜುಕಿಗಳಿಂದ ಅನುವಂಶಿಕವಾಗಿ ಪಡೆದರು. ಇವರು ಒಟ್ಟೋಮನ್ ಗಳಿಗಿಂತ ಮೊದಲು "ಅನಾಟೋಲಿಯನ್" ಎಂಬ ಪ್ರದೇಶದಲ್ಲಿ ಖಾನ್ಖ ಗಳನ್ನು ನಿರ್ಮಿಸಿದರು. ಆದ್ದರಿಂದ ಇಸ್ಲಾಮಿಕ್ ಸಂಸ್ಕೃತಿ ಮತ್ತು ಸಮಾಜದ ಯೋಗ ಕ್ಷೇಮ ಮತ್ತು ಅಭಿವೃದ್ಧಿಗಾಗಿ ಶಿಕ್ಷಣದ ಪ್ರಕ್ರಿಯೆಯಲ್ಲಿ ಭಾವನಾತ್ಮಕ ಮತ್ತು ಆಧ್ಯಾತತ್ಮಿಕ ಅಂಶಗಳು ಮುಖ್ಯವಾದ ಪಾತ್ರವನ್ನು ವಹಿಸಿದವು.
ಕನ್ನಡಕ್ಕೆ ಅನುವಾದ : ತಂಶೀರ್ ಉಳ್ಳಾಲ






Comments