ಕಿತಾಬುಶ್ಶಿಫಾ: ಅನುರಾಗಿಗಳ ಯಾತನೆಗೆ ನೀಡಿದ ಶಮನ
- Asif Adany Al Mueeni

- Sep 8, 2024
- 1 min read
ಖಾಳೀ ಇಯಾಳ್ (ರ) | ಭಾಗ-೧

ಅಬುಲ್ ಫಳ್‌ಲ್ ಇಯಾಲ್ ಬಿನ್ ಮೂಸ (ರ) ಹಿ.476 ಸ್ಪೇನಿನ ಝ್ಯೂಟದಲ್ಲಿ ಜನಿಸಿದರು. ಪುತ್ರ ಖಾಳೀ ಅಬೂ ಅಬ್ದುಲ್ಲಾ (ರ) ತಂದೆಯ ಬಗ್ಗೆ ಸ್ಮರಿಸುತ್ತಾರೆ; "ತಂದೆ ಚಿಕ್ಕಂದಿನಿಂದಲೇ ಸರ್ವ ಸಮ್ಮತರಾಗಿದ್ದರು. ಶುದ್ಧ ಜೀವನ, ಅಪಾರ ಗ್ರಹಿಕೆ ಶಕ್ತಿ, ವಿದ್ಯೆಯೊಂದಿಗಿನ ಸ್ನೇಹ, ಹಾಗು ಪರಿಶ್ರಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದರು. ಗುರುಗಳಿಗೆ ಖಾಳೀ ಇಯಾಳರ ಜೊತೆ ಸ್ನೇಹ ಹಾಗೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಇಮಾಮರು ತಮ್ಮ ಸಮಯದ ಸಿಂಹಪಾಲು ಭಾಗವನ್ನು ಗುರುವಿನ ಬಳಿ ವ್ಯಯಿಸುತ್ತಿದ್ದರು.
ಅರಿವಿನ ಅಧಿಪತಿಯಾಗಿದ್ದರು ಖಾಳೀ ಇಯಾಲ್ (ರ). ಏಳು ಶೈಲಿಯಲ್ಲಿ ಸಂಪೂರ್ಣ ಕುರ್ಆನ್ ಓದುವ ಅಭೂತಪೂರ್ವ ಸಾಮರ್ಥ್ಯವುಳ್ಳವರಾಗಿದ್ದರು. ಅದರೊಂದಿಗೆ ಕುರ್ಆನ್ ಬಗ್ಗೆ ಅಪಾರ ಜ್ಞಾನಿಯಾಗಿದ್ದರು. ಹದೀಸ್ ರಂಗದಲ್ಲಿ ಅತುಲ್ಯರಾಗಿದ್ದರು. ಹದೀಸ್ ನಿವೇದಕರ ಬಗೆ ಇರುವ ಈ ಇಲ್ಮಿನಲ್ಲಿ ಯಾರು ಮಾಡದ ಸಾಧನೆಯನ್ನು ಮಾಡಿದ್ದರು. ಅರಬ್ಬಿ ಭಾಷೆ, ವ್ಯಾಕರಣ ಮೊದಲಾದ ವಿಷಯಗಳಲ್ಲಿಯೂ ಮಿಂಚಿದ ಪ್ರತಿಭೆಯಾಗಿದ್ದರು. ಕರ್ಮ ಶಾಸ್ತ್ರದ ಇಮಾಮ್ಗಳೆಡೆಯಲ್ಲಿರುವ ಭಿನ್ನತೆಗಳ ಕುರಿತಾದ ವಿದ್ಯೆಯಲ್ಲೂ ಪ್ರಾವೀಣ್ಯರಾಗಿದ್ದರು. ಕವಿತೆ ಚರಿತ್ರೆ ಮುಂತಾದ ವಿಷಯಗಳಲ್ಲಿನ ಇಮಾಮರ ಪಾಂಡಿತ್ಯವನ್ನು ಅವರ ಗ್ರಂಥಗಳೇ ತಿಳಿ ಹೇಳುತ್ತಿದೆ. ಜ್ಞಾನಾರ್ಜನೆಯನ್ನು ಹರಸಿ ಬೆಳೆಸಿದ ಯಾತ್ರೆಗಳು ಅವರ ಜೀವನದುದ್ದಕ್ಕೂ ಕಾಣಬಹುದು.
ಶೈಖ್ ಅಬ್ದುಲ್ ರಹಮಾನ್ ಬಿನ್ ಅಹಮದ್ ಸ್ಮರಿಸುತ್ತಾರೆ : ಒಮ್ಮೆ ನಾನು ಖಾಳೀ ಇಯಾಳರ ಸಭೆಗೆ ಹಾಜರಾದೆ. ಅಂದು ಅವರು ಸ್ಪೈನಿನ ಗ್ರಾನಡಾದ ಖಾಝಿ ಪಟ್ಟವನ್ನು ಸ್ವೀಕರಿಸುವವರಾಗಿದ್ದರು. ಇಮಾಮರ ಬಳಿ ಅನೇಕರು ವಿದ್ಯಾರ್ಥಿಗಳು ಗೌರವಾನ್ವಿತರು ನೆರೆದಿದ್ದರು. ಅವರೆಲ್ಲರೂ ಇಮಾಮರ ಸುಪ್ರಸಿದ್ಧ ಗ್ರಂಥ 'ಅಶ್ಶಿಫಾ' ಗೆ ಗಮನಹರಿಸುತಿದ್ದರು. ಓದುವುದರಡೆಗೆ ವಿಷಯ ಒಂದರ ಕುರಿತು ನಾನು ಪ್ರಸ್ತಾಪಿಸಿದಾಗ ಇಮಾಮರು ಅದಕ್ಕೆ ಇರುವ ಕಾರಣ ಹುಡುಕಿದರು. ಅದರ ಕಾರಣ ನಾನೇ ಹೇಳಿ ವಿವರಿಸಿದಾಗ ಅದನ್ನು ಅವರು ಇಷ್ಟಪಟ್ಟರು. ಯಾವುದೇ ಹಿಂಜರಿಕೆಯಿಲ್ಲದೆ ತಿದ್ದಿಕೊಂಡರು. ಅಂದಿನಿಂದ ನನ್ನೊಂದಿಗೆ ಅಪಾರ ಸ್ನೇಹ ಹಾಗೂ ಅನುಕಂಪವುಳ್ಳವರಾಗಿದ್ದರು. ನಿಜವಾದ ವಿದ್ವಾಂಸನೊಬ್ಬನನ್ನಾಗಿತ್ತು ದರ್ಷಿಸಲು ಸಾಧ್ಯವಾದದ್ದು.
ಹಲವಾರು ವಿಷಯಗಳಲ್ಲಿ ಅನೇಕಾರು ಗ್ರಂಥಗಳನ್ನು ರಚಿಸಿದ್ದಾರೆ. ಅಶ್ಶಿಫಾ, ಇಕ್ಮಾಲುಲ್ ಮುಅಲ್ಲಿಂ ಬಿ ಫವಾಇದಿ ಸ್ವಹೀಹಿ ಮುಸ್ಲಿಂ, ತರ್ತೀಬುಲ್ ಮದಾರಿಕ್ ವ ತನ್ವೀರುಲ್ ಮಸಾಲಿಕ್ ಲಿ ಮಅರಿಫತಿ ಅ ಅಮಾಲಿ ಮದ್ಹಬಿ ಮಾಲಿಕ್ ಮುಂತಾದವುಗಳು. ಹಿ. 544 ರಲ್ಲಿ ಇಹಲೋಕ ತ್ಯಜಿಸಿದರು.
~ ಆಸಿಫ್ ಮುಈನಿ, ಅಲ್ ಅದನಿ ಆಚಂಗಿ






Comments