top of page

ಜ್ಞಾನದ ಅಗಾಧತೆ


ಜೀಲಾನಿ ಶೈಖರ ಜೀವನ ಪಾಠ-08


ಎಲ್ಲೆಲ್ಲೂ ಮುಹ್ಯಿದ್ದೀನ್ ಶೈಖರ ಪ್ರಖ್ಯಾತಿ ಹರಡಿದ್ದ ಸಮಯ. ಬಗ್ದಾದಿನ ನಿಪುಣರಾದ ನೂರು ವಿದ್ವಾಂಸರು ಒಂದು ಸೇರಿ ಶೈಖರ ಜ್ಞಾನವನ್ನು ಅಳತೆಮಾಡಲು ತೀರ್ಮಾನಿಸಿದರು. ಪ್ರತಿಯೊಬ್ಬರೂ ತಲಾ ಒಂದು ಪ್ರಶ್ನೆಯನ್ನು ತಯಾರಿಸಿಕೊಂಡು ಮಹಾನರ ಸನ್ನಿಧಿಗೆ ತಲುಪಿದರು. ಶೈಖರು ಮೆಲ್ಲಗೆ ತನ್ನ ತಲೆಯನ್ನು ತಗ್ಗಿಸಿದರು. ಆಗ ಅವರ ಹೃದಯದಿಂದ ಒಂದು ಪ್ರಕಾಶವು ಹೊರಹೊಮ್ಮಿತು. ಆ ಸಭೆಯಲ್ಲಿದ್ದ ಎಲ್ಲರ ಹೃದಯಗಳ ಮೂಲಕ ಆ ಪ್ರಕಾಶ ಹಾದುಹೋಯಿತು. ಪರಿಣಾಮವಾಗಿ ಅವರು ಪ್ರಶ್ನಿಸಲು ತಯಾರಿಸಿಕೊಂಡಿದ್ದ ಎಲ್ಲಾ ಪ್ರಶ್ನೆಗಳೂ ಅವರ ಮನಸ್ಸಿನಿಂದ ಮಾಯವಾಯಿತು.


ಅವರು ಜೋರಾಗಿ ಕೂಗತೊಡಗಿದರು. ಬಟ್ಟೆಗಳನ್ನು ಹರಿದುಕೊಂಡರು. ಮುಂಡಾಸುಗಳನ್ನು ಕಳಚಿಯಿಟ್ಟರು. ಆದರೆ ಅವರಿಗೆ ಮರೆತದ್ದೇನೂ ಮತ್ತೆ ನೆನಪಾಗಲೇ ಇಲ್ಲ. ಮಹಾನರು ಶಾಂತವಾಗಿ ಎದ್ದು ತಮ್ಮ ಆಸನದಲ್ಲಿ ಕುಳಿತುಕೊಂಡು, ಅವರು ತಯಾರಿಸಿದ್ದ ಎಲ್ಲಾ ಪ್ರಶ್ನೆಗಳನ್ನು ಹಾಗೂ ಅದಕ್ಕಿರುವ ಉತ್ತರವನ್ನೂ ನೀಡಿದರು.

ಮಹಾನರ ಅದ್ಭುತ ಜ್ಞಾನದ ಆಳವನ್ನು ಮನಗಂಡು ಬಂದವರು ಅವರ ಸ್ಥಾನವನ್ನು ಸಂಶಯವಿಲ್ಲದೇ ಒಪ್ಪಿಕೊಂಡರು.


(ಮೂಲ: ತಬಖಾತ್ ಅಲ್ ಶಅ್-ರಾನಿ)


ಅಲ್ಲಾಹನು ಶೈಖರ ಅಗಾಧ ಜ್ಞಾನದ ಬರಕತ್ತಿನಿಂದ ನಮ್ಮನ್ನು ಪರಲೋಕದ ವಿದ್ವಾಂಸರಲ್ಲಿ ಸೇರಿಸಲಿ. ಆಮೀನ್.


-ಮುಂದುವರಿಯುವುದು…

 
 
 

Comments


bottom of page