ಔಲಿಯಾಗಳ ರಾಜ: ಶೈಖ್ ಜೀಲಾನಿ
- Shahul Hameed Mueeni Al Adany

- Sep 26
- 2 min read
ಜೀಲಾನೀ ಶೈಖರ ಜೀವನಪಾಠ-01

قال عليه الصلاة والسلام : أولياء الله لا يموتون ولكن ينقلون من دار إلى دار ( تفسير الرازي)
ಪೈಗಂಬರ್ ﷺರು ಹೇಳಿದರು: “ಅಲ್ಲಾಹನ ಔಲಿಯಾಗಳು(ಇಷ್ಟದಾಸರು) ವಾಸ್ತವದಲ್ಲಿ ಮರಣ ಹೊಂದುವುದಿಲ್ಲ. ಬದಲಾಗಿ ಒಂದು ಸ್ಥಳದಿಂದ ಇನ್ನೊಂದೆಡೆಗೆ ಸ್ಥಳಾಂತರಗೊಳ್ಳುತ್ತಾರಷ್ಟೇ.”(ತಫ್ಸೀರ್ ಅಲ್-ರಾಝೀ)
ಅಲ್ಲಾಹನ ಔಲಿಯಾಗಳು
ಅಬೂ ಸಈದ್ ಖರಾಸ್ ಎಂಬವರು ಹೇಳುತ್ತಾರೆ: “ಒಮ್ಮೆ ನಾನು ಮಕ್ಕಾ ನಗರದಲ್ಲಿ ‘ಬನೂ ಶೈಬಾ’ ಎಂಬ ದ್ವಾರದ ಮೂಲಕ ಒಳಪ್ರವೇಶಿಸುತ್ತಿದ್ದೆ. ಅಲ್ಲಿ ಒಬ್ಬ ಯುವಕನ ಮೃತದೇಹವಿತ್ತು. ನಾನು ಆತನ ಮುಖವನ್ನು ನೋಡಿದಾಗ ಆತ ತುಂಟನಗೆ ಬೀರುತ್ತಾ ಹೀಗೆ ಹೇಳಿದನು: “ಓ ಅಬೂ ಸಯೀದ್, ನಿಮಗೆ ಗೊತ್ತಿಲ್ಲವೇ? ಅಲ್ಲಾಹನ ಔಲಿಯಾಗಳು ಮರಣ ಹೊಂದಿದರೂ ಜೀವಂತವಾಗಿರುತ್ತಾರೆ. ಅವರು ಮನೆಯನ್ನು ಬದಲಿಸುತ್ತಿರುತ್ತಾರೆ ಎಂದು ಮಾತ್ರ.”
(ಹದಾಯಿಕ್ ಅಲ್-ಹಖಾಯಿಕ್ / ಮೊಹಮ್ಮದ್ ಇಬ್ನ್ ಅಬೂ ಬಕರ್ ಅರ್-ರಾಝೀ)
ಕಿರ್ಮಾನಿ ರಳಿಯಲ್ಲಾಹು ಅನ್ಹುರವರು ಹೇಳುತ್ತಾರೆ: “ಅಲ್ಲಾಹನ ಔಲಿಯಾಗಳನ್ನು ಪ್ರೀತಿಸುವುದು ಬಹುದೊಡ್ಡ ಸತ್ಕರ್ಮವಾಗಿದೆ. ಏಕೆಂದರೆ ಔಲಿಯಾಗಳೊಂದಿಗಿನ ಪ್ರೀತಿ, ಅಲ್ಲಾಹನೊಂದಿಗಿರುವ ಪ್ರೀತಿಯ ಸಂಕೇತವಾಗಿದೆ.”
(ರೌದ್ ಅಲ್-ರಯಾಹೀನ್ / ಇಮಾಮ್ ಅಲ್-ಯಾಫಈ)
ಪಂಡಿತ ಶಿರೋಮಣಿಗಳು ಹೇಳುತ್ತಾರೆ:
“ಧರ್ಮನಿಷ್ಠರ ವಿರುದ್ಧವಾಗಿ ಕಾರ್ಯನಿರ್ವಹಿಸುವವರು ಜೀವನದ ಸಮೃದ್ದಿಯನ್ನು ಕಳೆದುಕೊಳ್ಳುತ್ತಾರೆ. ಅಂತಹ ವಿರೋಧವು ಅವರ ಅಂತ್ಯವನ್ನೂ ಕೆಡಿಸುತ್ತದೆ.”
(ರೌದ್ ಅಲ್-ರಿಯಾಹೀನ್ / ಇಮಾಮ್ ಅಲ್-ಯಾಫಯೀ)
ಔಲಿಯಾಗಳ ರಾಜ: ಶೈಖ್ ಜೀಲಾನಿ
ಅಲ್ಲಾಹನ ಔಲಿಯಾಗಳ ಪೈಕಿ ಅತ್ಯುನ್ನತ ಮತ್ತು ಅಗ್ರೇಸರರಾಗಿದ್ದಾರೆ ಮುಹ್ಯುದ್ದೀನ್ ಶೈಖ್ ಜೀಲಾನಿರವರು. ವಿಶೇಷವಾಗಿ ಈ ತಿಂಗಳು ಜೀಲಾನಿ ಶೈಖರ ಸ್ಮರಣೆಯ ತಿಂಗಳೂ ಕೂಡಾ ಹೌದು. ಅಲ್ಲಾಹನು ನಮಗೆ ಅನುಗ್ರಹಿಸಿದ ಎರಡನೇ ವಸಂತ. ಅವರ ಸಹಾಯವನ್ನು ಬಯಸಿ, ಅವರ ಕರಾಮತ್ ಮತ್ತು ಜೀವನಪಾಠಗಳ ಮೂಲಕ ಒಂದು ಸಣ್ಣ ಪ್ರಯಾಣವಾಗಿದೆ ಇದು. ಅಲ್ಲಾಹನು ಸ್ವೀಕರಿಸಲಿ. ಆಮೀನ್.
ಹಿಜರಿ ವರ್ಷ 470 ರಲ್ಲಿ ಜನಿಸಿದ ಶೈಖ್ ಜೀಲಾನಿರವರು ಔಲಿಯಾಗಳ ರಾಜರೆಂದೇ ಪ್ರಸಿದ್ಧರಾದವರು. ಇವರು ಹಿಜರಿ 561ನೇ ರಬೀಉಲ್ ಆಖಿರ್ ಹತ್ತರಂದು ತನ್ನ 91ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಕುಪ್ಪಿಕ್ಕಗತ್ತುಳ್ಳ ವಸ್ತುವಿನೆ ಪೊಲೆ
ಕಾನ್ಮಾನ್ ಞಾನ್ ನಿಙಳೆ
ಖಲ್ಬಾಗಂ ಎನ್ನೋವರ್
ಮಹಾನರಾದ ಅಬೂಬಕರ್ ಆಲ್ ಇಮಾದ್ ಎಂಬವರು ಹೇಳುತ್ತಾರೆ: ಒಮ್ಮೆ ನನಗೆ ನಂಬಿಕೆಯ ವಿಚಾರದಲ್ಲಿ ಒಂದು ಸಂಶಯವುಂಟಾದಾಗ, ನಾನು ನಿವಾರಣೆಗಾಗಿ, ಆ ಸಂಶಯದೊಂದಿಗೆ ಮುಹ್ಯುದ್ದೀನ್ ಶೈಖರ ಮಜ್ಲಿಸಿಗೆ ತೆರಳಿದೆ.
‘ಶೈಖರು ಹೃದಯದಲ್ಲಿರುವ ವಿಷಯಗಳನ್ನು ಸ್ವತಃ ತಿಳಿದು ಹೇಳಬಲ್ಲವರು’ ಎಂದು ಜನರು ಆಡುವ ಮಾತುಗಳನ್ನು ಮೊದಲೇ ಕೇಳಿದ್ದೆ. ಅಂದು ಅವರು ಭಾಷಣ ಮಾಡುತ್ತಿದ್ದಾಗ ಹೀಗೆ ಹೇಳಿದರು: “ನಮ್ಮ ವಿಶ್ವಾಸ, ನಂಬಿಕೆ ಪ್ರವಾದಿ ಅನುಚರರು (ಸ್ವಹಾಬತ್) ಮತ್ತು ಸಜ್ಜನರಶ್ರೇಷ್ಟರ ನಂಬಿಕೆಯಾಗಿದೆ.”
‘ಬಹುಶಃ ಇದು ನನ್ನ ಬಗ್ಗೆ ಅಲ್ಲ.’ಎಂದು ಒಳಗೊಳಗೇ ಭಾವಿಸಿಕೊಂಡೆ.
ಆದರೆ ಶೈಖರು ನನ್ನ ಕಡೆ ತಿರುಗಿ ಮತ್ತೊಮ್ಮೆ ಅದೇ ಮಾತು ಪುನರಾವರ್ತಿಸಿದರು. 'ಭಾಷಣಕಾರರು ಭಾಷಣದ ವೇಳೆಯಲ್ಲಿ ಎಲ್ಲರನ್ನೂ ನೋಡುವುದು ಸಹಜವಲ್ಲವೇ?.' ಎಂದುಕೊಂಡು ಸುಮ್ಮನಾದೆ. ಆದರೆ ಮೂರನೇ ಬಾರಿ, ನೇರ ನನ್ನೆಡೆಗೆ ನೋಡಿ ಹೀಗೆ ಹೇಳಿದರು: ‘ಓ ಅಬೂಬಕರ್, ನಮ್ಮ ನಂಬಿಕೆ ಪ್ರವಾದಿ ಅನುಚರರು ಮತ್ತು ಸಜ್ಜನಶ್ರೇಷ್ಟರ ನಂಬಿಕೆಯಾಗಿದೆ.’ ನಂತರ ಅವರು ‘ಓ ಅಬೂಬಕರ್, ಎದ್ದು ನಿಲ್ಲು. ಊರು ಬಿಟ್ಟು ಹೊರಟು ಹೋಗಿದ್ದ ನಿನ್ನ ತಂದೆ ಮನೆಗೆ ವಾಪಾಸಾಗಿದ್ದಾರೆ. ನಾನು ತಕ್ಷಣ ಎದ್ದು ಮನೆಗೆ ಹೋದೆ. ತಂದೆ ಮನೆಯಲ್ಲಿದ್ದರು.
(سير أعلام النبلاء /-الحافظ الذهبي)
ಅಲ್ಲಾಹನು ನಮ್ಮ ವಿಶ್ವಾಸವನ್ನು ಮರಣದವರೆಗೂ ದೃಢಗೊಳಿಸಲಿ. ಆಮೀನ್.
ಮೂಲ: ಅಬೂಬಕ್ಕರ್ ಅಹ್ಸನಿ ಪರಪ್ಪೂರ್
(ಮುದರ್ರಿಸ್, ಮಅದಿನ್ ಅಕಾಡೆಮಿ)
ಕನ್ನಡಕ್ಕೆ: ಶಾಹುಲ್ ಹಮೀದ್ ಮುಈನಿ ಅಲ್- ಅದನಿ






Shaik jilani .wapath ..and avara naadu .mattu avara appa ..amma ..na hesaru ..avara family full ditial idre kalisi