ವಿಶ್ವಾಸಿಗಳ ಪಾಲಿನ ಪವಿತ್ರ ತಿಂಗಳು ರಮಲಾನಿನಲ್ಲಿ, ಬಹುಶಃ ಮಲಬಾರ್ ಹೊರತುಪಡಿಸಿ ಭಾರತದಾದ್ಯಂತ ರೂಹ್ ಅಫ್ಝಾ ಇಲ್ಲದ ಇಫ್ತಾರಿನ ಕೂಟ ಅತಿ ವಿರಳ ಎನ್ನಬಹುದು. ದೆಹಲಿಯ ಓರ್ವ ಸಣ್ಣ ವ್ಯಾಪಾರಿ ತಯಾರಿಸಿದ ಈ ತಂಪು ಪಾನೀಯ ಜನ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಾಡಾದ ಹಿಂದಿನ ಒಂದು ಶತಮಾನದ ಚರಿತ್ರೆ ರೋಚಕ. 1907 ರ ಆಸುಪಾಸಿನಲ್ಲಿ ಯುನಾನಿ ವೈದ್ಯರಾಗಿದ್ದ ಹಕೀಮ್ ಹಮೀದ್ ಅಬ್ದುಲ್ ಮಜೀದ್ ಅವರು ಹಮ್ದರ್ದ್ ಎಂಬ ಹೆಸರಿನಲ್ಲಿ ಪಾರಂಪರಿಕ ಯುನಾನಿ ಔಷದಾಲಯ ಪ್ರಾರಂಭಿಸಿದರು. ದೆಹಲಿಯ ಬೇಸಿಗೆಯ ಬೇಗೆ ಭಯಾನಕವಾಗಿದ್ದರಿಂದ, 1910 ರ ವೇಳೆ ಹಲವಾರು ಔಷಧ ಗಿಡಮೂಲಿಕೆಗಳನ್ನು ಉಪಯೋಗಿಸಿ ನವೀನ ತಂಪು ಪಾನೀ